ರೆಂಜಿಲಾಡಿ ಗೋಳಿಯಡ್ಕ; ಶ್ರೀ ರಾಜನ್ ದೈವದ ನೇಮ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಕಲ್ಲುಗುಡ್ಡೆ: ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಪುಂಡಿಕ್‍ಮಾಡ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ಅಭಿವೃದ್ಧಿ ಸಮಿತಿ ವತಿಯಿಂದ ರೆಂಜಿಲಾಡಿ ಗೋಳಿಯಡ್ಕ ಪುಂಡಿಕ್‍ಮಾಡದಲ್ಲಿ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮ ಶನಿವಾರ ನಡೆಯಿತು.

ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಅವರ ಸಾರಥ್ಯದಲ್ಲಿ ಪ್ರಸಾದ್ ಕೆದಿಲಾಯ ಅವರ ನೇತೃತ್ವದಲ್ಲಿ ಶನಿವಾರ ಸಾಯಂಕಾಲ ಗರ್ಗಸ್‍ಪಾಲ್ ಡೊಂಕಿಮಾರ್ ಛಾವಡಿಯಲ್ಲಿ ಗಣಹೋಮ ಹಾಗೂ ದೈವಗಳ ಶುದ್ಧೀಕಲಶ ನಡೆದು ರಾತ್ರಿ ಪೂರ್ವ ಸಂಪ್ರದಾಯದಂತೆ ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲರನ್ನು ಕರೆತರಲಾಯಿತು.

ಬಳಿಕ ಗರ್ಗಸ್‍ಪಾಲ್ ಛಾವಡಿಯಿಂದ ಗೋಳಿಯಡ್ಕ ಪುಂಡಿಕ್ ಮಾಡಕ್ಕೆ ದೈವಗಳ ಭಂಡಾರ ತರಲಾಯಿತು. ಶನಿವಾರ ಮುಂಜಾನೆಯಿಂದ ಪರಿವಾರ ದೈವಗಳ ಹಾಗೂ ಶ್ರೀ ರಾಜನ್ ದೈವದ ನೇಮ ನಡೆಯಿತು. 


ಕಡಬ ಟೈಮ್ಸ್ ಸುದ್ದಿ ಹಂಚಿರಿ