ಕಡಬ ಮೆಸ್ಕಾಂ ಅಧಿಕಾರಿಗಳಿಗೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮೀರಾ ಸಾಹೇಬ್

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಪಟ್ಟಣ ಸುದ್ದಿ : ಕಡಬ ಮೆಸ್ಕಾಂ ವ್ಯಾಪ್ತಿಯ ಎಲ್ಲಾ ಕಡೆಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದಲ್ಲಿ ಫೆಬ್ರವರಿ 20ರಂದು  ಕಡಬ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು  ಎಂದು ಕಡಬ ತಾಲೂಕು ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬರು ಎಚ್ಚರಿಸಿದ್ದಾರೆ.

ಅವರು ಶನಿವಾರದಂದು ಕಡಬದಲ್ಲಿ ಕಾಂಗ್ರೆಸ್, ಜೆಡಿಎಸ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ರೈತ ಸಂಘ, ವರ್ತಕರು ಸಂಘಗಳ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಳೆದ 2 ವರ್ಷಗಳಿಂದ   ವಿದ್ಯುತ್ ಸಮಸ್ಯೆ ಬಗ್ಗೆ ವಿದ್ಯುತ್  ಬಳಕೆದಾರರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಾ ಬಂದಿದ್ದಾರೆ  ಆದರೆ  ಇನ್ನೂ ಕೂಡ  ವಿದ್ಯುತ್ ಕೊರತೆ ನೀಗಿಲ್ಲ.ಅಲ್ಲದೆ  ರೈತರ ಪಂಪುಸೆಟ್ ಗಳಿಗೆ ವಾರದಲ್ಲಿ 3 ದಿನ ಕರೆಂಟ್ ಕೊಟ್ಟರು ಲೋ ವೋಲ್ಟೇಜ್ ಸಮಸ್ಯೆಯಿಂದ ಪಂಪುಗಳು ಚಾಲನೆ ಆಗುತ್ತಿಲ್ಲ

ಅರ್ಧ ಗಂಟೆಗೊಮ್ಮೆ ಕರೆಂಟ್ ಹೋಗಿ  ಬರುತ್ತಿರುವುದರಿಂದ ಮೋಟಾರ್ ಗಳು ಸುಟ್ಟು ಭಸ್ಮವಾಗುತ್ತಿದೆ ,ಗ್ರಾ.ಪಂ ಗಳ ಮೂಲಕ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ  ವಿದ್ಯುತ್ ಸಮಸ್ಯೆಯಿಂದ  ಜನ ಕುಡಿಯುವ ನೀರಿಗೂ ಕಷ್ಟ ಪಡುವಂತಾಗಿದೆ. ಸರ್ಕಾರಿ ದಾಖಲಾತಿಗಳನ್ನು  ಪಡೆಯಲು ಜನ ವಿವಿಧ ಕಚೇರಿಗಳಲ್ಲಿ ಸಾಲುಗಟ್ಟಿ ವಾರಗಟ್ಟಲೇ ನಿಲ್ಲುವಂತ ಪರಿಸ್ಥಿತಿ ಎದುರಾಗಿದೆ,  ಬಿಎಸ್ ಎನ್ ಎಲ್ ದೂರವಾಣಿ ಸಂಪರ್ಕ, ಇಂಟರ್ನೆಟ್ ಸೇವೆ  ಕೂಡ ವಿದ್ಯುತ್ ಸಮಸ್ಯೆಯಿಂದ  ಇಲ್ಲದಂತಾಗಿದೆ  ಎಂದರು.

ಈ ಸಂದರ್ಭದಲ್ಲಿ  ಕಡಬ ಬ್ಲಾಕ್ ಕಾಂಗ್ರೆಸ್, ಜಾತ್ಯತೀತ ಜನತಾದಳ, ರೈತ ಸಂಘದ ಪ್ರಮುಖರು ಹಾಜರಿದ್ದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ