ಸವಣೂರು: ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತ ವ್ಯಕ್ತಿಯ ಅಂಗಡಿಗೆ ಬೆಂಕಿ!

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಸವಣೂರು: ಕಡಬ ತಾಲೂಕಿನ  ಕುದ್ಮಾರು  ಶಾಂತಿಮೊಗರು ತಿರುವಿನಲ್ಲಿ ಫೆ. 14ರ ಮಧ್ಯರಾತ್ರಿ ಗೂಡಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ.  

ಕುದ್ಮಾರಿನಲ್ಲಿ 5ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯದ  ಆರೋಪದ ಹಿನ್ನೆಲೆಯಲ್ಲಿ  ಫೆ.14ರಂದು ಕುದ್ಮಾರಿನ ಶಾಂತಿಮೊಗರು ತಿರುವಿನಲ್ಲಿ ಅಂಗಡಿ ಹೊಂದಿರುವ ಅಬ್ದುಲ್ ಎಂಬಾತನನ್ನು  ಬೆಳ್ಳಾರೆ ಪೋಲೀಸರು ವಶಕ್ಕೆ ಪಡೆದಿದ್ದರು. ಇದೀಗ ಅಂದೇ ರಾತ್ರಿ ಈತನಿಗೆ ಸೇರಿದ್ದ ಗೂಡಂಗಡಿಗೆ ಬೆಂಕಿ ಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 ಮಧ್ಯರಾತ್ರಿ 2 ಗಂಟೆ ಸಮಯಕ್ಕೆ ಅಂಗಡಿಗೆ ಬೆಂಕಿ ಬಿದ್ದಿದೆ ಎಂದು ಪೋಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಈ ಕುರಿತಾಗಿ ತನಿಖೆ ನಡೆಯುತ್ತಿದ್ದು,  ಸ್ಥಳದಲ್ಲಿ  ಕಡಬ, ಪುತ್ತೂರು, ಬೆಳ್ಳಾರೆ ಪೋಲೀಸರು ಸವಣೂರು ಹಾಗೂ ಘಟನೆ ನಡೆದ ಸ್ಥಳದಲ್ಲಿ ಬಿಗಿ ಭದ್ರತೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ