ರಾಮಕುಂಜ:ಅಕ್ಷರ ಜಾತ್ರೆಯ ಸಾರಥಿ ಟಿ.ನಾರಾಯಣ ಭಟ್ ರಾಮಕುಂಜ ಅವರೊಂದಿಗೆ ಸಂದರ್ಶನ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ವಿಶೇಷ: ಕಡಬ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ  ಇದೇ  ಫೆಬ್ರವರಿ 28ಮತ್ತು 29 ರಂದು  ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.  ಈ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರು  ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ಶಿಕ್ಷಕ,ಲೇಖಕ  ಟಿ.ನಾರಾಯಣ ಭಟ್ ರಾಮಕುಂಜ.  ಸಮ್ಮೇಳನಾಧ್ಯಕ್ಷ ರೊಂದಿಗೆ ಕಡಬ ಟೈಮ್ಸ್ ಚಿಟ್ ಚಾಟ್ ವೀಡಿಯೋ ನೋಡಿ.

ಗ್ರಾಮೀಣ ಭಾಗವಾಗಿರುವ ರಾಮಕುಂಜದಲ್ಲಿ  ಕೃಷಿ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದು ಬಂದ ಟಿ.ನಾರಾಯಣ ಭಟ್ ರಾಮಕುಂಜರವರು ಲೇಖಕನಾಗಿ ,ಸಮಾಜಸೇವಕನಾಗಿ,ದಾರ್ಮಿಕ ಚಿಂತಕನಾಗಿ, ಶೈಕ್ಷಣಿಕ ಮಾರ್ಗದರ್ಶಕನಾಗಿ ಬೆಳೆದರು.   ಲೇಖಕನಾಗಿ ಹಲವು  ಕೃತಿಗಳನ್ನು ಪ್ರಕಟಸಿದ ನಾರಾಯಣ ಭಟ್ ರವರು   ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ   ಬದುಕಿನ ಚಿತ್ರಣವಿರುವ  “ರಾಮಕುಂಜದಿಂದ ರಾಷ್ಟ್ರಾದ್ಯಂತ ವಿಶ್ವೇಶತೀರ್ಥರ ವಿಶಿಷ್ಟ ಪಯಣ’ ಕೃತಿ ಜನಪ್ರಿಯಗೊಂಡು ಓದುಗರಿಂದ ಹೆಚ್ಚೆಚ್ಚು ಬೇಡಿಕೆಯನ್ನು ಪಡೆದಿದೆ. ಇದರ ಜೊತೆಗೆ   ‘ನಮ್ಮ ಮಕ್ಕಳು ಹೇಗಿರಬೇಕು’ ‘ ನಮ್ಮ ಮಕ್ಕಳ ಯಶಸ್ಸು ಹೇಗೆ ಸಾಧ್ಯ ?’  ‘ಬದುಕು ಬದಲಾಯಿಸಬಲ್ಲ ಮಕ್ಕಳ ಕಥೆಗಳು ಕೃತಿಗಳು ಹೆಚ್ಚು ಬೇಡಿಕೆಯ ಪುಸ್ತಕಗಳಾಗಿದ್ದು, ಇವುಗಳಿಗೆ ವಿವಿಧ ಪ್ರಶಸ್ತಿಗಳು ಲಭಿಸಿದೆ.

ಟಿ.ನಾರಾಯಣ ಭಟ್ ರವರ   ಶೈಕ್ಷಣಿಕ ಕ್ಷೇತ್ರದಲ್ಲಿನ  ಸಾಧನೆ ಮತ್ತು ಸೇವೆಗಾಗಿ  ಅತ್ಯುತ್ತಮ ಶಿಕ್ಷಕ ಪ್ರಶಸ್ತಿ,  ರಾಜ್ಯ ಮಟ್ಟದ ಅತ್ಯುತ್ತಮ  ಶಿಕ್ಷಕ ಪ್ರಶಸ್ತಿ , ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ  ನೂರಾರು ಸಂಘ-ಸಂಸ್ಥೆಗಳಿಂದ ಸನ್ಮಾನ, ಅಭಿನಂದನೆ ಇವರ ಪಾಲಾಗಿದೆ.ಇದೀಗ  ರಾಮಕುಂಜದಲ್ಲಿ ನಡೆಯಲಿರುವ ಮೊದಲ ಅಕ್ಷರ ಜಾತ್ರೆಯ ತೇರು ಎಳೆಯುವ ಮೊದಲ ಸಾರಥಿ ಇವರಾಗಿದ್ದಾರೆ.   ಇವರಿಗೆ ಕಡಬ ಟೈಮ್ಸ್ ಬಳಗದಿಂದ ಅಭಿನಂದನೆಗಳು


ಕಡಬ ಟೈಮ್ಸ್ ಸುದ್ದಿ ಹಂಚಿರಿ