ಪುತ್ತೂರು: ಆರು ತಿಂಗಳ ಹಿಂದೆ ನಡೆದ ಹಿಟ್&ರನ್ ಪ್ರಕರಣ: ಚಾಲಕನ ಬಂಧನ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಪುತ್ತೂರು: ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಕಡಬ ಪೊಲೀಸರು ಶುಕ್ರವಾರ ಪತ್ತೆ ಹಚ್ಚಿದ್ದು, ಇದರ ಬೆನ್ನಲ್ಲೆ ಕಾರು ಚಾಲಕ ಪ್ರಶಾಂತ್ ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಪ್ರಬಲ ಆಕಾಂಕ್ಷಿಯಾಗಿದ್ದ ಕುಮಾರ್ ಪುತ್ತಿಲ ಅವರಿಗೆ ಸೇರಿದ ಕಾರು ಇದಾಗಿದೆ.ಅರುಣ್ ಪುತ್ತಿಲ ಅವರು ಚಾಲಕ ಕಾರನ್ನು ಕೊಂಡೊಯ್ದು ಬಗ್ಗೆ ಪೊಲೀಸರಿಗೆ ತಿಳಿಸಿರುವುದಾಗಿ ತಿಳಿದು ಬಂದಿದೆ.

ಕಳೆದ 5 ತಿಂಗಳ ಹಿಂದೆ ಇನೋವಾ ಕ್ರಿಸ್ಟಾ ಕಾರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಬಿಳಿನಲೆ ಗ್ರಾಮದ ನೆಟ್ಟಣದಲ್ಲಿ ನಡೆದಿತ್ತು.ಘಟನೆಯಲ್ಲಿ
ಗಂಭೀರ ಗಾಯಗೊಂಡಿದ್ದ ಸುಮತಿ (48) ಬಳಿಕ ಸಾವನ್ನಪ್ಪಿದ್ದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ