ಕಡಬ: ಆರು ತಿಂಗಳ ಹಿಂದೆ ನೆಟ್ಟಣದಲ್ಲಿ ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ ಪತ್ತೆ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಆರು ತಿಂಗಳ ಹಿಂದೆ  ಮಹಿಳೆಯೊಬ್ಬರಿಗೆ  ಡಿಕ್ಕಿ ಹೊಡೆದು  ಪರಾರಿಯಾದ ಕಾರನ್ನು ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ.  

ಈ ಕಾರು ಅರುಣ್ ಕುಮಾರ್ ಪುತ್ತಿಲ  ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.  ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ  ಕಾರಿನ ಬಗ್ಗೆ  ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಆಧಾರಿಸಿ ಪತ್ತೆಹಚ್ಚಲಾಗಿದ್ದು, ಪೊಲೀಸರು ಕೊನೆಗೂ  ಬೆನ್ನಟಿ ಪ್ರಕರಣವನ್ನು ಬೇಧಿಸಿದ್ದಾರೆ.

ಸಿಸಿ ಟಿವಿ ದೃಶ್ಯ

ಮಹಿಳೆಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ  ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.  2019 ರ ಸೆಪ್ಟೆಂಬರ್  9 ರಂದು  ಸುಬ್ರಹ್ಮಣ್ಯ- ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ಮಹಿಳೆಗೆ ಡಿಕ್ಕಿ ಹೊಡೆದು ಕಾರು ಪರಾರಿಯಾಗಿತ್ತು.ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸುಮತಿ(48) ಎಂಬವರು ಮೃತಪಟ್ಟಿದ್ದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ