ಸುಬ್ರಹ್ಮಣ್ಯ: ಮರದ ಗೆಲ್ಲು ಕಡಿಯುವಾಗ ಹಗ್ಗ ಸಿಕ್ಕಿಹಾಕಿಕೊಂಡು ಯುವಕ ಸಾವು

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಸುಬ್ರಹ್ಮಣ್ಯ:   ಮರದ ಗೆಲ್ಲು ಕಡಿಯುವಾಗ  ಹಗ್ಗ ಸಿಕ್ಕಿಹಾಕಿಕೊಂಡು ವ್ಯಕ್ತಿಯೋರ್ವ  ಮರದಲ್ಲೇ ಮೃತಪಟ್ಟ ಘಟನೆ ಗುರುವಾರ  ಸುಬ್ರಹ್ಮಣ್ಯ ಬಳಿಯ ನೂಚಿಲದಲ್ಲಿ ನಡೆದಿದೆ.

ಸುನಿಲ್ ಅರಂಪಾಡಿ ಮೃತಪಟ್ಟ ದುರ್ದೈವಿ. ನೂಚಿಲ ಎಂಬಲ್ಲಿ ಜಯರಾಮ ರಾವ್ ಮನೆ ಎದುರಿನ  ಗುಡ್ಡದಲ್ಲಿರುವ ಮರದ ಕೊಂಬೆಯನ್ನು ಕಡಿದು ಉರುಳಿಸುತ್ತಿದ್ದರು.ಈ ವೇಳೆ  ಮರದ ತುದಿಯಲ್ಲಿರುವ ಕೊಂಬೆಯಲ್ಲಿ   ಹಗ್ಗ ಸಹಿತ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.  

ಸ್ಥಳೀಯರಿಂದ ಬೃಹತ್ ಮರದಿಂದ ಮೃತದೇಹವನ್ನು ಇಳಿಸುವ ವ್ಯವಸ್ಥೆ ಮಾಡಲಾಗಿದೆ.  ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಆಗಮಿಸಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ