ವೈರಲ್ ಸ್ಟೇಟಸ್: ಕಡಬದಲ್ಲಿ ಏನು ಬೇಕಾದ್ರೂ ಸಿಗುತ್ತೆ…ಕರೆಂಟ್ ಒಂದು ಬಿಟ್ಟು!

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಮನೋರಂಜನೆ:  ಕಡಬ ಸೇರಿದಂತೆ  ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಆಗಾಗ ಕೈ ಕೊಟ್ಟು  ತೆರಿಗೆದಾರನಿಗೆ ಮೆಸ್ಕಾಂ ಇಲಾಖೆ  ನಿರಂತರ ಶಾಕ್ ನೀಡುತ್ತಾ ಬಂದಿದೆ.

ಈ ನಡುವೆ ಸಾಮಾಜಿಕ ತಾಣದಲ್ಲಿ  “ಕಡಬದಲ್ಲಿ ಏನು ಬೇಕಾದ್ರೂ ಸಿಗುತ್ತೆ…ಕರೆಂಟ್ ಒಂದು ಬಿಟ್ಟು!”  ಎನ್ನುವ  ಹಾಸ್ಯ ಸಾಲಿನ ಜೊತೆಗೆ   ಹಾಸ್ಯ ನಟ ಅರವಿಂದ  ಬೋಳಾರ್ ಅವರ ಪೊಟೋ  ವೈರಲ್ ಆಗಿದೆ.

ಜನರು ಯಾವುದೇ ದಿಕ್ಕು ತೋಚದೆ  ವಿಧಿಯಿಲ್ಲದೆ  ಅಳುವಂತ ಸನ್ನಿವೇಶಕ್ಕೆ ಹೋಲಿಸಿ ಈ ಇಮೇಜ್ ನ್ನು ವಿವಿಧ ವಾಟ್ಸಪ್ ಗುಂಪುಗಳಲ್ಲಿ ಹಂಚಲಾಗುತ್ತಿದೆ.ಇದರ ಜೊತೆಗೆ ಸ್ಟೇಟಸ್ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ