ಕಡಬದಲ್ಲಿ ಎಂದಿನಂತೆ ವಾಹನ ಸಂಚಾರ, ಕರ್ನಾಟಕ ಬಂದ್ ಗೆ ಬೆಂಬಲವಿಲ್ಲ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಗೆ   ಕರಾವಳಿ ಜಲ್ಲೆ ಸಹಿತ ತಾಲೂಕು ಕೇಂದ್ರವಾದ ಕಡಬದಲ್ಲಿಯೂ  ಯಾವುದೇ  ಸ್ಪಂದನೆ ದೊರೆತಿಲ್ಲ. ಗುರುವಾರ ಬೆಳಿಗ್ಗೆ ಎಲ್ಲಾ ಸಂಚಾರ ವ್ಯವಸ್ಥೆ ಎಂದಿನಂತಿದ್ದು, ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ.

ತಾಲೂಕಿನ ಪ್ರಮುಖ ಸ್ಥಳವಾದ  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಅಗಮಿಸುತ್ತಿದ್ದಾರೆ.  ನೆಲ್ಯಾಡಿ,ಪಂಜ,ನಿಂತಿಕಲ್ಲು, ಆಲಂಕಾರು,ಸವಣೂರು, ಉಪ್ಪಿನಂಗಡಿ ಪ್ರದೇಶದಲ್ಲಿನ  ಕೆಎಸ್ ಆರ್ ಟಿಸಿ  ಬಸ್ ಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ . ಇವುಗಳ ಸಂಚಾರ ಯಥಾಸ್ಥಿತಿಯಿದೆ.   ಶಾಲಾ ಕಾಲೇಜುಗಳು ಎಂದಿನಂತೆ  ಮುಂದುವರಿದಿದ್ದು, ಯಾವುದೇ ರೀತಿಯ ರಜೆ ಘೋಷಿಸಲಾಗಿಲ್ಲ.  ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದೆ.

ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿಯನ್ನು ಸರಕಾರ ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ