ಸುಬ್ರಹ್ಮಣ್ಯ: ಅತ್ಯಾಚಾರ ಪ್ರಕರಣ,ಪ್ರಮುಖ ಆರೋಪಿಗಳನ್ನು ಬಂಧಿಸುವಂತೆ ದಲಿತ್ ಸೇವಾ ಸಮಿತಿಯಿಂದ ಒತ್ತಾಯ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,   ಸುಬ್ರಹ್ಮಣ್ಯ: ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ  ನಡೆದ ದಲಿತ ಯುವತಿಯ  ಅತ್ಯಾಚಾರ ಪ್ರಕರಣದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಸುಳ್ಯ -ಕಡಬ ಒತ್ತಾಯಿಸಿದೆ.

ಸುಮಾರು ಏಳು ಜನ ಯುವಕರ ತಂಡ  ಕೆಲವು ವರ್ಷಗಳಿಂದ ಪದೇ ಪದೇ ಅತ್ಯಾಚಾರ ಮಾಡಿ ದೌರ್ಜನ್ಯವೆಸಗಿದ್ದು  ಬಂಧಿತರೆಲ್ಲರ ವಿರುದ್ಧ ಅತ್ಯಾಚಾರ ,  ದಲಿತ ದೌರ್ಜನ್ಯ   ಮತ್ತಿತರ ಕಾಯಿದೆಗಳ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.  ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಿದ್ದು , ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಸಂತ್ರಸ್ತಗೆ ನ್ಯಾಯ ಒದಗಿಸಬೇಕು ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸುಬ್ರಹ್ಮಣ್ಯ   ಪೋಲಿಸ್ ಠಾಣೆಗೆ ಮನವಿ ಮಾಡಲಾಯಿತು.

ಇದಕ್ಕೂ ಮೊದಲು ಯುವತಿಯ ಮನೆಗೆ ಭೇಟಿ ನೀಡಿ ಸುಬ್ರಹ್ಮಣ್ಯ ಪೋಲಿಸರ ಸಮ್ಮುಖದಲ್ಲಿ ಯುವತಿಯ ಕುಟುಂಬದ ಸದಸ್ಯರಲ್ಲಿ ಆಗು ಹೋಗುಗಳ ಬಗ್ಗೆ ಚಚಿ೯ಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ದಲಿತ್ ಸೇವಾ ಸಮಿತಿಯ ಅಧ್ಯಕ್ಷರಾದ ವಸಂತ ಕುದ್ಪಾಜೆ , ಜಿಲ್ಲಾ ಉಪಾಧ್ಯಕ್ಷರಾದ ಅಣ್ಣಿ ಎಲ್ತಿಮಾರ್ ,ಡೊಂಬಯ್ಯ ಕೊಲ್ಲಮೊಗ್ರ , ಉಮೇಶ್ ಅಲೆಕ್ಕಾಡಿ , ಕುಮಾರ ಬಳ್ಳಕ್ಕ , ಯಶವಂತ ಕಡಬ ,ರಾಜೇಶ್ ಕಡಬ ,ವಾಸುದೇವ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು .


ಕಡಬ ಟೈಮ್ಸ್ ಸುದ್ದಿ ಹಂಚಿರಿ