ಮಂಗಳೂರು:ಆ್ಯಸಿಡ್ ದಾಳಿ ಸಂತ್ರಸ್ತೆಯನ್ನು ಭೇಟಿ ಮಾಡಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಮಂಗಳೂರು:  ಇತ್ತೀಚೆಗೆ ಕೋಡಿಂಬಾಳದಲ್ಲಿ ಗೆ ಒಳಗಾಗಿ  ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ  ಸ್ವಪ್ನಾ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಮಂಗಳವಾರ ಭೇಟಿ ಮಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಂತ್ರಸ್ತೆ ಆ್ಯಸಿಡ್ ಉರಿ ತಾಳದೇ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ನಡೆದುಕೊಂಡ ವರ್ತನೆ  ಖಂಡನಾರ್ಹವಾಗಿದೆ . ಸಂತ್ರಸ್ತೆ ಪೊಲೀಸರ ಮೇಲಿಟ್ಟ ಭರವಸೆ ಇಲ್ಲಿ ಹುಸಿಯಾಗಿದೆ ಎಂದರು. ಆಸಿಡ್  ಉರಿ ಯನ್ನು ಸಹಿಸಿಕೊಂಡು ಠಾಣೆಗೆ  ತೆರಳಿದ್ದಾರೆ.  ಈ ಸಂದರ್ಭ ದೂರನ್ನು ಲಿಖಿತವಾಗಿ ಬರೆದು ಕೊಡಲು ಸೂಚಿಸಿದ್ದರು.  ಸಂತ್ರಸ್ತೆಯನ್ನು ಪೊಲೀಸರು  ಆಸ್ಪತ್ರೆಗೆ ಕಳುಹಿಸಲು ವಾಹನ ವ್ಯವಸ್ಥೆ ಮಾಡಿ ಬಳಿಕ ದೂರು ಪಡೆಯಬಹುದಿತ್ತು.  ಈ ವೇಳೆ ಪೊಲೀಸರ ಮಾನವೀಯತೆ ಮಣ್ಣಾಗಿತ್ತೇ  ಎಂದು ಕಿಡಿ ಕಾರಿದರು.

ಪೊಲೀಸರ ಒತ್ತಡದ ಕೆಲಸದ ಬಗ್ಗೆ ಕನಿಕರವಿದ್ದು, ಮಾನವೀಯತೆ ಮೆರೆಯಬೇಕಾದ ಸಂದರ್ಭದಲ್ಲಿ ಮನಸುಗಳು ಕಲ್ಲಾದರೆ ಹೇಗೆ ಎಂದು ಪ್ರಶ್ನಿಸಿದ  ಅವರು, ಸಂತ್ರಸ್ತೆಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸಂತ್ರಸ್ತೆಗೆ  ಮಾನಸಿಕವಾಗಿ ಸ್ಥೈರ್ಯ ನೀಡಿದ್ದೇನೆ ಎಂದು ಅವರು ತಿಳಿಸಿದರು. ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಡಬ್ಲ್ಯೂನಿಂದ ಸುಮೊಟೊ ಕೇಸು ದಾಖಲಿಸಲಾಗಿದೆ. ಎಸ್ಪಿ   ಬಿ.ಎಂ.ಲಕ್ಷ್ಮೀಪ್ರಸಾದ್  ಅವರಿಗೆ ಸಲಹೆ-ಸೂಚನೆ ನೀಡಿದ್ದೇನೆ.  ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪತ್ರ ಬರೆದು, ಶೀಘ್ರ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದರು. ಪ್ರಕರಣದ ತನಿಖೆ ಹಾಗೂ ಕರ್ತವ್ಯ ಲೋಪ ಎಸಗಿರುವ ಪೊಲೀಸರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡದಲ್ಲದೆ,  ಒಂದು ತಿಂಗಳು ನಂತರ ಪ್ರಕರಣದ ಬೆಳವಣಿಗೆಯ ಮಾಹಿತಿಯನ್ನು ಪಡೆಯಲಿದ್ದೇನೆ ಎಂದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ