ದೆಹಲಿ ಚುನಾವಣೆಯಲ್ಲಿ ಅಮ್‌ಅದ್ಮಿ ಪಕ್ಷ ಗೆಲುವು:ಸುಳ್ಯದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಸುಳ್ಯ ವಿಧಾನಸಭಾ ಕ್ಷೇತ್ರ:  ಮೂರನೆ ಬಾರಿಗೆ ದೆಹಲಿ ಚುನಾವಣೆಯಲ್ಲಿ ಅಮ್‌ಅದ್ಮಿ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ   ಸುಳ್ಯ ಅಮ್‌ಅದ್ಮಿ ಪಕ್ಷದ ಕಾರ್ಯಕರ್ತರು ಬುಧವಾರ  ಜನಸಾಮಾನ್ಯರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಸುಳ್ಯ ಅಮ್ ಆದ್ಮಿ ಪಕ್ಷದ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ, ರಾಮಕೃಷ್ಣ ಬೀರಮಂಗಿಲ, ಡಿ.ಮ್.ಶಾರೀಕ್, ಕಲಂದರ್ ಶಾಫಿ ಹಳೆಗೇಟು, ಶಂಶುದ್ದಿನ್ ಕೆ.ಎಂ, ದೀಕ್ಷಿತ್ ಜಯನಗರ, ಸುಮಿತ್ರ ತೊಡಿಕಾನ, ಬಶೀರ್ ಕ್ವಾಲಿಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಸರಕಾರದ ಕಾರ್ಯವೈಖರಿ ಬಗ್ಗೆ ಜನಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ