ಕಡಬ: ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ :ಸುಬ್ರಹ್ಮಣ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ ಕೃಷ್ಣಪ್ಪ ಸ್ಥಾಪಿತ) ಆಗ್ರಹಿಸಿದೆ.

ಕಡಬದಲ್ಲಿ ಬುಧವಾರದಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ  ಜಿಲ್ಲಾ  ಸಂಘಟಕ  ಆನಂದ ಮಿತ್ತಬೈಲ್ ಅವರು,  ಅತ್ಯಾಚಾರ ಮಾಡಿದ  ಬಗ್ಗೆ ಯಾರಿಗೂ  ಹೇಳದಂತೆ   ಪ್ರಮುಖ ಆರೋಪಿಗಳಾಗಿರುವ  ದುರ್ಗಾಪ್ರಸಾದ್ ಮತ್ತು ಚಂದ್ರಶೇಖರ್  ಎಂಬವರು ಈ ಪ್ರಕರಣದ  ಪ್ರಮುಖ  ಆರೋಪಿಗಳಾಗಿದ್ದು ತಲೆ ಮರೆಸಿಕೊಂಡಿದ್ದಾರೆ. ಅಲ್ಲದೆ ಬಡಕುಟುಂಬಕ್ಕೆ  ಬೆದರಿಕೆ ಒಡ್ಡಿರುವ ಬಗ್ಗೆ ಸಂಘಟನೆಗೆ ಮಾಹಿತಿ ಬಂದಿದೆ. ಈ ರೀತಿಯ ಹೇಯ ಕೃತ್ಯ ಮತ್ತು ಬೆದರಿಕೆಯಿಂದ  ಇವರ ಜೀವನ ಅಪಾಯದಲ್ಲಿದಂತೆ ಕಾಣುತ್ತಿದ್ದು, ಈ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದರು.

ಈ ಕೃತ್ಯದ ವಿರುದ್ದ ದಲಿತಪರ ಸಂಘಟನೆಗಳು ಸಂತ್ರಸ್ತ ಯುವತಿ ಮತ್ತು ಕುಟುಂಬಕ್ಕೆ  ನ್ಯಾಯಕ್ಕಾಗಿ ಹೋರಾಟವನ್ನು ಬಲಗೊಳಿಸಲು  ಜೊತೆಗೂಡುವಂತೆ  ದ.ಸಂ.ಸ   ಕಡಬ ತಾಲೂಕು ಸಮಿತಿ ಮನವಿ ಮಾಡುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ,ರಂಗನಾಥ, ಗಂಗಾಧರ ನಾಡೋಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ