ಸುಬ್ರಹ್ಮಣ್ಯದಲ್ಲಿ ಅಪ್ರಾಪ್ತ ದಲಿತ ಯುವತಿಯ ಅತ್ಯಾಚಾರ:ನಾಲ್ವರ ಬಂಧನ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಸುಬ್ರಹ್ಮಣ್ಯ : ದಲಿತ ಅಪ್ರಾಪ್ತ ಯುವತಿಯೊಬ್ಬಳನ್ನು ಕೆಲವು ಯುವಕರು ಅತ್ಯಾಚಾರ ಮಾಡಿದ ಕಾರಣ ಆಕೆ ಗರ್ಭವತಿಯಾಗಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ  ಇದಕ್ಕೆ ಸಂಬಂಧಿಸಿ  ಸುಬ್ರಹ್ಮಣ್ಯ ಪೊಲೀಸರು ನಾಲ್ವರನ್ನು  ಬಂಧಿಸಿರುವುದಾಗಿ ತಿಳಿದು ಬಂದಿದೆ.

ಸುಬ್ರಹ್ಮಣ್ಯದ  17 ವರ್ಷದ  ಯುವತಿಯೊಬ್ಬಳನ್ನು  ಕೆಲವು ಯುವಕರು ಕರೆದೊಯ್ದು ಅತ್ಯಾಚಾರ ನಡೆಸಿದ್ದರೆಂದು ಹೇಳಲಾಗುತ್ತಿದ್ದು  ಆಕೆ ಗರ್ಭವತಿಯಾದಾಗ  ಗರ್ಭಪಾತವಾಗುವಂತೆ ಮಾಡಲು ಬೇರೆಬೇರೆ ರೀತಿಯ ಹಲವು ಮಾತ್ರೆಗಳನ್ನು ನುಂಗಲು ನೀಡಿದ್ದರೆಂದೂ ಹೇಳಲಾಗುತ್ತಿದೆ .  ಇದರ ಪರಿಣಾಮವಾಗಿ ಆಕೆಗೆ ತೀವ್ರ ರಕ್ತಸ್ರಾವ ಆರಂಭವಾಯಿತೆನ್ನಲಾಗಿದೆ. ಇದರಿಂದಾಗಿ ಈ  ಸಮಾಜ ತಲೆತಗ್ಗಿಸುವ  ದುರಂತ ಮನೆಯವರ ಗಮನಕ್ಕೆ ಬಂದಿದೆ.

ಈ ಘಟನೆಗೆ ಸಂಬಂಧಿಸಿ  ಸಂಕೇತ್ ಮತ್ತು ವೆಂಕಟೇಶ್ ಎಂಬವರ ಮೇಲೆ ಮೊದಲು ದೂರು ನೀಡಿದ ಯುವತಿ ನಂತರ ವಿಚಾರಣೆಯ  ವೇಳೆ ದುರ್ಗಾಪ್ರಸಾದ್, ಚಂದ್ರಶೇಖರ, ದೀಕ್ಷಿತ್ , ಅಶೋಕ್ ಎಂಬವರ ಹೆಸರುಗಳನ್ನೂ ಹೇಳಿರುವುದಾಗಿ ತಿಳಿದುಬಂದಿದೆ.  ಪೊಲೀಸರು ಸಂಕೇತ್ ಎಂಬಾತನನ್ನು ಈಗಾಗಲೇ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಗಳಲ್ಲಿ  ಇನ್ನೂ ಕೆಲವರನ್ನು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ