ಕಡಬ: ಎಸ್.ಎಸ್.ಎಫ್ ವತಿಯಿಂದ ಸಮಾಜ ಮುಖಿ ಕಾರ್ಯ, ರಕ್ತದಾನ ಶಿಬಿರಕ್ಕೆ ಉತ್ಸಾಹ ತೋರಿದ ಯುವಕರು

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ : ಕರ್ನಾಟಕ ರಾಜ್ಯ “ಸುನ್ನಿಸ್ಟೂಡೆಂಟ್ ಪೆಡರೇಶನ್ “(ಎಸ್.ಎಸ್.ಎಫ್)ಕಡಬ ಸೆಕ್ಟರ್ ವತಿಯಿಂದ ಮಂಗಳೂರು ಲೇಡಿಗೋಷನ್  ಆಸ್ಪತ್ರೆಯ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸಹಬಾಗಿತ್ವದಲ್ಲಿ ಫೆ.೯ರಂದು ಕಡಬ ಅಂಬೆಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.

ದ.ಕ.ಜಿಲ್ಲಾ ಬ್ಲೆಡ್ ಸೈಬೋ ಉಸ್ತುವಾರಿ ಕರೀಂ ಖದ್ಕರ್ ಕಾರ್ಯಕ್ರಮ  ಉದ್ಘಾಟಿಸಿದರು. ಕಡಬ ಬ್ರಾಂಚ್  ಎಸ್.ವೈ.ಎಸ್ ಅಧ್ಯಕ್ಷ ಹಕೀಮ್ ಮದನಿ ದುವಾಃ ಪ್ರಾರ್ಥನೆ ಗೈದರು. ಕಡಬ ಎಸ್.ಎಸ್.ಎಫ್ ಸೆಕ್ಟರ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿ  ಪ್ರಾಸ್ತಾವಿಕವಾಗಿ ಮಾತನಾಡಿ  ನಮ್ಮ ಯುವ ಸಮುದಾಯ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಮಾಜದ ಜನರಪಾಲಿಗೆ  ಸಹಕಾರಿಯಾಗಿಬೇಕೆಂದರು.

ಎಸ್.ಎಸ್.ಎಫ್  ಬ್ಲೆಡ್ ಸೈಬೋ ಉಪ್ಪಿನಂಗಡಿ ಉಸ್ತುವಾರಿ ಇಸಾಕ್ ಮದನಿ ಮಾತನಾಡಿ ನಾವು ನೀಡುವ ರಕ್ತವು ಅದೇಷ್ಟೂ ರೋಗಿಗಳಿಗೆ ಜೀವದಾನ ನೀಡಲು ಸಹಕರಿಯಾಗುತ್ತದೆ ಎಂದರಲ್ಲದೆ  ಜಿಲ್ಲಾ ೧೪೧ನೇ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದು ಇಲ್ಲಿಯ ಯುವಸಮುದಾಯ ಸಹಭಾಗಿತ್ವ ಅತೀವ ಸಂತೋಷ ತಂದಿದೆ ಎಂದರು.ಬಳಿಕ  40ಕ್ಕೂ ಹೆಚ್ಚು ಶಿಬಿರಾರ್ಥಿಗಳಾಗಿ ಆಮಗಮಿಸಿ  ರಕ್ತದಾನ ಮಾಡಿದರು.   ಎಸ್.ಎಸ್.ಎಫ್ ಕಡಬ ಸೆಕ್ಟರ್‌ನ ಹಾರಿಸ್ ಕೋಡಿಂಬಾಳ  , ಎಸ್.ಎಸ್.ಎಫ್ ಕಡಬ ಉಪಾಧ್ಯಕ್ಷ ಝಿಯಾರ್ ಕೋಡಿಂಬಾಳ, ಕಾರ್ಯದರ್ಶಿ ಶೆರೀಫ್ ಕಲ್ಲಾಜೆ  ಸಭಾ ಕಾರ್ಯಕ್ರಮ ನಿರ್ವಹಿಸಿದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ