ಉಜಿರೆ: ಸಮುದಾಯ ಬಾನುಲಿ ಕೇಂದ್ರದಲ್ಲಿ ಹಿರಿಯ ಆಯುರ್ವೇದ ತಜ್ಞ ರಾಜ್ ಗೋಪಾಲ್ ಶರ್ಮರವರ ಸಂದರ್ಶನ ಪ್ರಸಾರ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಉಜಿರೆ: ಉಜಿರೆಯ ರೇಡಿಯೋ ನಿನಾದ 90.4 FM ಸಮುದಾಯ ಬಾನುಲಿ ಕೇಂದ್ರದಲ್ಲಿ ಪ್ರಸಾರವಾಗುವ ಹವ್ಯಕ ಭಾಷಾ ಸರಣಿ ಕಾರ್ಯಕ್ರಮದಲ್ಲಿ ಹಿರಿಯ ಆಯುರ್ವೇದ ತಜ್ಞ ರಾಜ್ ಗೋಪಾಲ್ ಶರ್ಮ ಪೆರ್ನೆ ಇವರ ಸಂದರ್ಶನ ಫೆ.12 ರಂದು ಬೆಳಿಗ್ಗೆ 8 ಗಂಟೆಗೆ ಪ್ರಸಾರವಾಗಲಿದೆ.

ಗ್ರಾಮೀಣ ಭಾಗದಲ್ಲಿ ಸುಮಾರು 40 ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇವರನ್ನು ಡಾ.ಅನನ್ಯ ಲಕ್ಷ್ಮೀ ಸಂದೀಪ್ ಸಂದರ್ಶಿಸಿದ್ದಾರೆ ಎಂದು ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕ ವಿ.ಕೆ ಕಡಬ ತಿಳಿಸಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ