ರಾಮಕುಂಜ: ನೀರಿನ ಟ್ಯಾಂಕ್ ಬಳಿಯೇ ನರಿ,ದನ,ಮುಂಗುಸಿ ಸಾವು

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ರಾಮಕುಂಜ:ರಾಮಕುಂಜ ಸರ್ಕಾರಿ ಶಾಲೆಯ ವಠಾರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಬಳಿ ಒಂದೇ ಕಡೆ ದನ,ನರಿ,ಮುಂಗುಸಿ ಪ್ರಾಣಿಗಳು ಸತ್ತುಬಿದ್ದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಈ ಘಟನೆ ಎರಡು ದಿನಗಳ ಹಿಂದೆ ವಿಷ ಸೇವನೆಯಿಂದಲೇ ಸಾವನ್ನೊಪ್ಪಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಶಾಲಾ ಮಕ್ಕಳು ಕುಡಿಯಲು ಉಪಯೋಗಿಸುವ ನೀರಿನ ಟ್ಯಾಂಕ್ ಬಳಿಯೇ ಈ ಘಟನೆ ನಡೆದಿದ್ದು ಆತಂಕಕ್ಕೂ ಕಾರಣವಾಗಿದೆ. ಪ್ರಾಣಿಗಳು ಸತ್ತು ಬಿದ್ದಿರುವ ಸ್ಥಳದಲ್ಲಿ  ಎಲೊಂದರಲ್ಲಿ ವಿಷ ಪದಾರ್ಥವೊಂದು ಸಿಕ್ಕಿದ್ದು ಇದರಿಂದಾಗಿಯೇ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಅಲ್ಲಿನ ನಿವಾಸಿಗಳು ಅಂದಾಜಿಸಿದ್ದಾರೆ.

ಗ್ರಾಮದ ಝಕರಿಯಾ ಮುಸ್ಲಿಯಾರ್ ಎಂಬವರ ದನ ಸತ್ತುಬಿದ್ದಿದ್ದು,ಇನ್ನೊಂದು ಜಾನುವಾರು ಅಸ್ವಸ್ಥ ಗೊಂಡು ಬಳಿಕ ಚಿಕಿತ್ಸೆ ಯ ನಂತರ ಚೇತರಿಸಿಕೊಂಡಿದೆ.ಕಾಡು ಪ್ರಾಣಿಗಳು ತೊಂದರೆ ಮಾಡುವ ಕಾರಣಕ್ಕೆ ವಿಷ ಇಟ್ಟಿರಬಹುದೆ ಎಂಬ ಪ್ರಶ್ನೆಯೂ ಜನರಲ್ಲಿ ಮೂಡಿದೆ. ಕಡಬ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ