ಕಡಬ:ರಾಷ್ಟ್ರಮಟ್ಟದ ಸಾಧನೆ:ಮೋಹನ್ ಕೆರೆಕೋಡಿ ಅವರಿಗೆ ಅದ್ದೂರಿ ಸ್ವಾಗತ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಗುಜರಾತ್ ನಲ್ಲಿ ನಡೆದ ರಾಷ್ಟ್ರ ಮಟ್ಟ ಕ್ರೀಡೆಯಲ್ಲಿ  ಚಿನ್ನದ ಪದಕ ಪಡೆದು ಕಡಬಕ್ಕೆ ಆಗಮಿಸಿದ ಮೋಹನ್ ಕೆರೆಕೋಡಿ ಅವರನ್ನು ಸೋಮವಾರ ಸಮಸ್ತ ಕಡಬದ ನಾಗರಿಕರು ತಹಶೀಲ್ದಾರ್ ಕಚೇರಿ ಬಳಿ ಅದ್ದೂರಿಯಾಗಿ ಬರಮಾಡಿಕೊಂಡರು.

ಸುಳ್ಯ ವಿಧಾನ ಸಭಾ ಕ್ಷೇತ್ರದ  ಶಾಸಕ ಎಸ್. ಅಂಗಾರ  ಹೂವಿನ ಹಾರ ಹಾಕಿ ಸ್ವಾಗತಿ ಆತ್ಮೀಯವಾಗಿ ಬರ ಮಾಡಿಕೊಂಡರು.ಬಳಿಕ ಮಾತನಾಡಿ,ಅಂತರಾಷ್ತ್ರೀಯ ಮಟ್ಟದಲ್ಲಿ ಗುರುತಿಸಿ ಜಪಾನ್ ನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು ಹೇಳಿ ಶುಭ ಹಾರೈಸಿದರು.  ಬಳಿಕ  ಚೆಂಡೆಯ ಸದ್ದಿನೊಂದಿಗೆ  ಕಡಬದ ಮುಖ್ಯ ಪೇಟೆಯವರೆಗೆ ಅದ್ದೂರಿ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ಕರೆದುಕೊಂಡು ಬರಲಾಯಿತು.

ಕಡಬದ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ಇದರ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮಕ್ಕೆ ಶ್ರೀ ರಾಮ ಯುವಕ ಮಂಡಲ ರಾಮನಗರ ,ಜೆಸಿಐ ಕಡಬ ಕದಂಬ,ಮಧುರ ಟೂರಿಸ್ಟ್ ವ್ಯಾನ್ ಮತ್ತು ಟಾಕ್ಸಿ ಮಾಲಕ ಮತ್ತು ಚಾಲಕರ ಸಂಘ ,ಕದಂಬ ಅಟೋ ರಿಕ್ಷಾ ಮಾಲಕ ಚಾಲಕರ ಸಂಘ,ಸಂಗಮ ಟೂರಿಸ್ಟ್ ಜೀಪ್ ಚಾಲಕ ಮಾಲಕರ ಸಂಘ,ಪ್ರೆಂಡ್ಸ್ ಕ್ಲಬ್  ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು. ರಾಜಕೀಯ ಮುಖಂಡರು,ಊರಿನ ಪ್ರಮುಖರು ,ಗ್ರಾಮಸ್ಥರು ಪಾಲ್ಗೊಂಡರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ