ಕೋಡಿಂಬಾಳ: ಆಸಿಡ್ ದಾಳಿ ಸಂತ್ರಸ್ತೆಗೆ ರಾಜ್ಯ ಸರ್ಕಾರದಿಂದ ಬಂತು ಮೂರು ಲಕ್ಷ ರೂ ಪರಿಹಾರ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ:ಆಸಿಡ್ ದಾಳಿಗೆ ಒಳಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋಡಿಂಬಾಳದ ಸಪ್ನಾ ಎಂಬವರಿಗೆ  ವೈದ್ಯಕೀಯ ವೆಚ್ಚಕ್ಕಾಗಿ  ರಾಜ್ಯ  ಸರ್ಕಾರದಿಂದ ಮೂರು  ಲಕ್ಷ ರೂ. ಪರಿಹಾರ ದೊರಕಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತ್ರಸ್ತೆ ದಾಖಲಾಗಿದ್ದ  ಆಸ್ಪತೆಗೆ ಭೇಟಿ ನೀಡಿ  ಮುಖ್ಯ  ಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಶಿಫಾರಸ್ಸು ಒದಗಿಸುವುದಾಗಿ ಭರವಸೆ ನೀಡಿದ್ದರು .ಈ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಲಕ್ಷ್ಮೀ ಪ್ರಸಾದ್  ಸೂಚನೆಯಂತೆ ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದ ತಂಡ ಆಸಿಡ್ ದಾಳಿಯ ಕುರಿತು ಸಮರ್ಪಕ ತನಿಖೆ ನಡೆಸಿದ್ದರು.  ಜಿಲಾಧಿಕಾರಿ ಸಿಂಧೂ ಬಿ ರೂಪೇಶ್ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು.

ನೀತಿ ಸಾಮಾಜಿಕ  ಸಂಘಟನೆ,ಬಿಜೆಪಿ ಮಹಿಳಾ ಮೋರ್ಚಾ ಸೇರಿದಂತೆ   ವಿವಿಧ ಸಂಘಟನೆಗಳು ವೈಧ್ಯಕೀಯ ವೆಚ್ಚ ಭರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು. ಇದೀಗ ರಾಜ್ಯ ಸರ್ಕಾರ ಸಂತ್ರಸ್ತೆ ಸಪ್ನಾ ಅವರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮೆ ಮಾಡಿದೆ.  ಆಸಿಡ್ ದಾಳಿ ಆದ ಬಳಿಕ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ವಿವಿಧ ಮಾಧ್ಯಮಗಳು ವಿಸ್ಕೃತ ವರದಿಯನ್ನು ಪ್ರಕಟಿಸಿದ್ದವು.


ಕಡಬ ಟೈಮ್ಸ್ ಸುದ್ದಿ ಹಂಚಿರಿ