ಕೇಪು ದೇವಸ್ಥಾನ:ವಾರ್ಷಿಕ ಜಾತ್ರೆ ಸಂಪನ್ನ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ನೂಜಿಬಾಳ್ತಿಲ: ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ದೇವಸ್ಥಾನ, ಶ್ರೀ ಪಂಚಮುಖಿ ಆಂಜನೇಯ(ಮುಖ್ಯಪ್ರಾಣ)  ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಫೆಬ್ರವರಿ 2 ರಂದು ನಡೆಯಿತು.

ಬ್ರಹ್ಮ ಶ್ರೀ ಕೆಮ್ಮಿಂಜೆ  ನಾಗೇಶ ತಂತ್ರಿಗಳ ನೇತೃತ್ವದಲ್ಲಿ  ಶ್ರೀ ದೇವರಿಗೆ ಮಹಾಗಣಪತಿ ಹೋಮ, ಕಲಶ ಪೂಜೆ ,ಶ್ರೀ ದೇವರ  ಬಲಿ ಹೊರಟು ಉತ್ಸವ, ದೇವರ ದರ್ಶನ ಬಲಿ, ಮಧ್ಯಾಹ್ನ  ಶ್ರೀ ದೇವರಿಗೆ ಕಲಶಾಭಿಷೇಕ ನಾಗ ತಂಬಿಲ , ದೈವಗಳಿಗೆ ತಂಬಿಲ ಸೇವೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋವಿಂದ ಭಟ್ , ಅರ್ಚಕ ನವೀನ್ ಭಟ್  ಪೂಜಾವಿಧಿ ವಿಧಾನಗಳಲ್ಲಿ ಸಹಕರಿಸಿದರು.

 ವಿವಿಧ ಊರುಗಳಿಂದ ಆಗಮಿಸಿದ ಭಕ್ತ ಸಮೂಹ  ದೇವರ ದರುಶನ ಪಡೆದರು.ವಿಶೇಷ ಆಕರ್ಷಣೆಯಾಗಿ  ಬಜ್ಪೆ ಕೊಲಂಬೆ ಬ್ಯಾಂಡ್ ಸೆಟ್ ನವರಿಂದ  ವಾದ್ಯಗೋಷ್ಟಿ ನಡೆದದಲ್ಲದೆ, ಕಾಂಞಗಾಡ್ ಚೆಂಡೆ ತಂಡ ದವರಿಂದ ಚೆಂಡೆ  ವಾದನ ಗಮನ ಸೆಳೆಯಿತು.  ಜಾತ್ರೋತ್ಸವದ ಪ್ರಯುಕ್ತ ಫೆ .1 ರ ರಾತ್ರಿ  ಮತ್ತು 2 ರ  ಮಧ್ಯಾಹ್ನ  ಮಹಾ ಪೂಜೆಗೆ ಮೊದಲು ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.  ಅನ್ನಸಂತರ್ಪಣೆಯೂ ವ್ಯವಸ್ಥಿತವಾಗಿತ್ತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ನಂದುಗುರಿ, ಕಾರ್ಯದರ್ಶಿ ಸುರೇಶ್  ದೇಂತಾರು, ಆಡಳಿತ ಮಂಡಳಿ ಪದಾಧಿಕಾರಿಗಳು,ಸ್ಥಳೀಯ ಜನ ಪ್ರತಿನಿಧಿಗಳು,ಊರಿನ ಗಣ್ಯರು,ಗ್ರಾಮಸ್ಥರು  ಸೇರಿದಂತೆ ಊರ ಪರವೂರ ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ