ಕಡಬ: ಶ್ರೀಕಂಠಸ್ವಾಮಿ, ಮಹಾಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾ ಜಾತ್ರೋತ್ಸವ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ಶ್ರೀ ಶ್ರೀಕಂಠಸ್ವಾಮಿ ಮತ್ತು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ 14ನೇ ವರ್ಷದ ಪ್ರತಿಷ್ಠಾ ಜಾತ್ರೋತ್ಸವವು ಫೆ.3ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ  ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.  

ಸೋಮವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶಪೂಜೆ ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ ನಡೆದು ಶ್ರೀದೇವರಿಗೆ  ಮಹಾಪೂಜೆ, ನಡೆಯಿತು ಬಳಿಕ ಪ್ರಸಾದ ವಿತರಿಸಿ  ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ದೈವಜ್ಞ ಪ್ರಸಾದ್ ಕೆದಿಲಾಯ, ದೇವಸ್ಥಾನ ಪ್ರಧಾನ ಆರ್ಚಕರು ಕೇಶವ ಬೈಪಾಡಿತ್ತಾಯ ಪೂಜಾ ವಿಧಿ ವಿಧಾನ ನೆರವೇರಿಸಿದರು.ದೇವಸ್ಥಾನದ ಆಡಳಿತಾಧಿಕಾರಿ ಕಡಬ ಕಂದಾಯ ನಿರೀಕ್ಷಕ  ಅವಿನ್ ರಂಗತ್ತಮಲೆಯವರು ಭಕ್ತಾದಿಗಳನ್ನು ಬರಮಾಡಿಕೊಂಡರು.  ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ ಗೌಡ ಅಲುಂಗೂರು, ಮಾಜಿ ಅಧ್ಯಕ್ಷ ಸತೀಶ್ ನಾೈಕ್ ಮೇಲಿನ ಮನೆ, ಎ.ಪಿ.ಎಂ.ಸಿ.ನಿದೇಶಕಿ ಪುಲಸ್ತ್ಯ ರೈ ,ಆಡಳಿತ ಸಮಿತಿ ಮಾಜಿ ಕಾರ್ಯದರ್ಶಿ ಜಿನ್ನಪ್ಪ ಸಾಲಿಯನ್ ಸೇರಿದಂತೆ ಊರಿನ ಪ್ರಮುಖರು ಭಕ್ತಾದಿಗಳು ಉಪಸ್ಥಿತರಿದದ್ದರು.


ಕಡಬ ಟೈಮ್ಸ್ ಸುದ್ದಿ ಹಂಚಿರಿ