ಕಡಬದ ಜನ ಪ್ರತಿನಿಧಿಗಳಿಗೆ ಈ ಬಾರಿಯ ಬಜೆಟ್ ತೃಪ್ತಿ ನೀಡಿದೆಯೇ? ಇಲ್ಲಿದೆ ಅಭಿಪ್ರಾಯ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್, ಪಟ್ಟಣ ಸುದ್ದಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಹು ನಿರೀಕ್ಷಿತ ಬಜೆಟ್‌-2020 ನ್ನು ಮಂಡಿಸಿದ್ದಾರೆ.ವಿವಿಧ ಪಕ್ಷದ ನಾಯಕರಿಂದ, ಜನ ಸಾಮಾನ್ಯರಿಂದ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.ಕಡಬದ ಮೂವರು ಜನ ಪ್ರತಿನಿಧಿಗಳು ಬಜೆಟ್ ಕುರಿತಾಗಿ  ತಮ್ಮ ಅಭಿಪ್ರಾಯವನ್ನು ಕಡಬ ಟೈಮ್ಸ್ ಜೊತೆ ಹಂಚಿಕೊಂಡಿದ್ದಾರೆ.

” ಸರ್ವರೂ ಆರ್ಥಿಕ ಸ್ವಾವಲಂಬಿಗಳಾಗಿ  ಅಭಿವೃದ್ದಿಯತ್ತ ಸಾಗುವಲ್ಲಿ ಉತ್ತಮ ಬಜೆಟ್ ಮಂಡಿಸಿದ ಪ್ರಧಾನಿ  ಮೋದಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತುಕೊಟ್ಟು ದೇಶದ ಬೆನ್ನೆಲುಬಾಗಿರುವ ಕೃಷಿವರ್ಗದವರ ಬದುಕನ್ನು ಸುಭದ್ರಗೊಳಿಸಿದೆ. ಮಹಿಳಾ ಸಬಲೀಕರಣ ,ಮದ್ಯಮ ವರ್ಗದವರಿಗೆ ಚೈತನ್ಯ ತುಂಬುವ  ಬಜೆಟ್ ಇದಾಗಿದ್ದು, ಸರ್ವರ ಅಬ್ಯುಧ್ಯಯವನ್ನು ಬಯಸಿ ಜನಪರ ಬಜೆಟ್ ಮಂಡಿಸಿರುವುದು ಶ್ಲಾಘನಾರ್ಹವಾಗಿದೆ” –ಕೃಷ್ಣ ಶೆಟ್ಟಿ  ಕಡಬ , ಮಾಜಿ ಜಿ.ಪಂ ಸದಸ್ಯರು

“ಸಬ್ ಕಾ ಸಾತ್ ಸಬ್ ಕಾ  ವಿಕಾಸ್ ಎಂಬ  ಘೋಷ ವಾಕ್ಯದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ   ನೋಟ್ ಬ್ಯಾನ್ ಆದ ಬಳಿಕ ನಿರುದ್ಯೋಗ ಸಮಸ್ಯೆಯಿಂದ ಜನ ಸಂಪೂರ್ಣ ಸಂಕಷ್ಟದಲ್ಲಿದ್ದಾರೆ.  ಈಗ ಮತ್ತೆ  ಸರ್ಕಾರದ ಯೋಜನೆಯಾದ  ಎಲ್.ಐ.ಸಿ  ಯನ್ನು ಖಾಸಗಿಕರಣಗೊಳಿಸಿದ್ದು ಸರಿಯಲ್ಲ,  ಹಿಂದುಳಿದ ಅಲ್ಪಸಂಖ್ಯಾತ, ದೀನ ದಲಿತರನ್ನು ಸಂಕಷ್ಟಕ್ಕೊಳಪಡಿಸಿದ್ದು  ಕೃಷಿಕರಿಗೂ ನಿರಾಶದಾಯಕ ಬಜೆಟ್ ಇದಾಗಿದೆ.  ಬಹುತೇಕ ಸಾರ್ವಜನಿಕರಿಗೆ ಈ  ಹೊಸ ಪಟ್ಟಿ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಾಗಿದೆ”  –ಪಿ.ಪಿ ವರ್ಗೀಸ್,  ಜಿ.ಪಂ ಸದಸ್ಯರು

“ಬಡ ಜನತೆಗೆ  ಮತ್ತು ಮದ್ಯಮ ಜನರಿಗೆ ಆಗಬೆಕಾದ ಬಜೆಟ್ ಇದಲ್ಲ,   ಕೃಷಿಕರಿಗೆ  ಈ ಹಿಂದೆ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳು ಸರಿಯಾಗಿ ತಲುಪಿಲ್ಲ.  ಅಲ್ಪ ಸಂಖ್ಯಾತರನ್ನು ಬಜೆಟ್ ನಿಂದ  ಹೊರಗಿಟ್ಟು   ಮಂಡಿಸಿದ ಬಜೆಟ್ ಇದಾಗಿದ್ದು, ಆರ್ಥಿಕವಾಗಿ ಜನರನ್ನು ಬಲಪಡಿಸುವ ಅಂಶಗಳು  ಬಜೆಟ್ ನಲ್ಲಿ ಇಲ್ಲ.  ಗೊತ್ತುಗುರಿಯಿಲ್ಲದ ಬಜೆಟ್ ಇದಾಗಿದೆ” – ಸಯ್ಯದ್ ಮೀರಾ ಸಹೇಬ್ ,  ಮಾಜಿ ಜಿಲ್ಲಾ ಪರಿಷತ್ ಸದಸ್ಯರು 


ಕಡಬ ಟೈಮ್ಸ್ ಸುದ್ದಿ ಹಂಚಿರಿ