ಕಳಾರದಲ್ಲಿ ತಡೆಗೋಡೆ ಕೆಲಸ ಆರಂಭ!

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್,ಕಳಾರ: ಕಡಬ ಗ್ರಾ.ಪಂ.ವ್ಯಾಪ್ತಿಯ ಕಳಾರ ದಲಿತ ಕಾಲೋನಿಯಲ್ಲಿ ಸುಳ್ಯ ಶಾಸಕರ ಅನುದಾನದಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಎರಡು ವರ್ಷಗಳ ಹಿಂದೆ ಗುದ್ದಲಿ ಪೂಜೆ ನಡೆದಿದ್ದ ಸ್ಥಳ ದಲ್ಲಿ ಕಾಮಗಾರಿ ಆರಂಭಗೊಂಡಿದೆ.

ಮಳೆಗಾಲದಲ್ಲಿ ಈ ತೋಡಿನ ಬದಿ ಕುಸಿತಗೊಂಡು ನೀರು ಸಮರ್ಪಕವಾಗಿ ಹರಿಯದೆ ಗದ್ದೆಗಳಿಗೆ ನುಗ್ಗುತ್ತಿತ್ತು.ಅಲ್ಲದೆ ಮೇಲ್ಬಾಗದಲ್ಲಿದ್ದ ಮನೆಗೂ ಅಪಾಯದ ಆತಂಕವಿತ್ತು. ಸುತ್ತಮುತ್ತಲಿನ ಭತ್ತ ಕೃಷಿ ಕರಿಗೆ ತೊಂದರೆಯಾಗುತ್ತಿತ್ತು.ಸ್ಥಳೀಯರು ಈ ಸಮಸ್ಯೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು,ನಂತರ
ಸುಳ್ಯ ಶಾಸಕ ಎಸ್.ಅಂಗಾರ ರವರು 5 ಲಕ್ಷ ರೂ.ಅನುದಾನವನ್ನು ತಡೆಗೋಡೆ ನಿರ್ಮಿಸಲು ಒದಗಿಸಿದ್ದರು.

ಅನುದಾನ ಬಿಡುಗಡೆಗೊಂಡು ಎರಡುವರ್ಷವಾಗುತ್ತಾ ಬಂದಿದ್ದರೂ ಕಾಮಗಾರಿ ಆರಂಭಿಸದ ಬಗ್ಗೆ ಜನವರಿ 14 ರಂದು
ಅಬ್ಬರದ ಗುದ್ದಲಿಪೂಜೆಗೆ ಎರಡು ವರ್ಷ: ತಡೆಗೋಡೆ ಮಾತ್ರ ನಿರ್ಮಾವಾಗಿಲ್ಲ! ಶೀರ್ಷಿಕೆಯಡಿ ಕಡಬ ಟೈಮ್ಸ್ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ತಡೆಗೋಡೆ ನಿರ್ಮಿಸಲು ಬೇಕಾದ ಎಲ್ಲಾ ಸಲಕರಣೆಗಳು ಸ್ಥಳದಲ್ಲಿದ್ದು,ಅಡಿಪಾಯ ನಿರ್ಮಾಣಗೊಂಡು ಕೆಲಸ ಪ್ರಗತಿಯಲ್ಲಿದೆ.

ಪಿಡ್ಬ್ಲೂಡಿ ಇಂಜಿನಿಯರ್ ಭರತ್ ಅವರ ನಿರ್ದೇಶನದಂತೆ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಪ್ರಕಾಶ್ ಎನ್.ಕೆ ಕೆಲಸ ನಿರ್ವಹಿಸುತ್ತಿದ್ದಾರೆ.ಕಳಾರ ಕಾಲೋನಿಯ ಜನರ ಬಹುದಿನಗಳ ಬೇಡಿಕೆ ಈಡೇರುತ್ತಿದೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ