ರಾಮಕುಂಜ:ಮನೆಯ ಕಿಟಕಿಯಿಂದ ಚಿನ್ನ,ನಗದು ಎಗರಿಸಿದ ಕಳ್ಳರು,ಶ್ವಾನದಳ ಆಗಮನ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್, ರಾಮಕುಂಜ: ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಮನೆಯೊಂದರಿಂದ ಚಿನ್ನ, ನಗದು ಇದ್ದ ಬ್ಯಾಗ್ ಕಳ್ಳತನಗೊಂಡದಲ್ಲದೆ  ಸಮೀಪದ ಎರಡು ಮನೆಗಳಿಂದ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ಜನವರಿ 30 ಗುರುವಾರ ಬೆಳಗಿನ ಜಾವ ನಡೆದಿದೆ.

ಕಡಬ ಠಾಣಾ ವ್ಯಾಪ್ತಿಯ  ನೀರಾಜೆ ನಿವಾಸಿ ಅಬೂಬಕ್ಕರ್ ಯಾನೆ ಪುತ್ತುಕುಂಞಿ ಎಂಬವರ ಮನೆಯಲ್ಲಿ ಮಲಗಿದ್ದ ಮಹಿಳೆಯೋರ್ವರ ಕಾಲಿನಿಂದ ಕಾಲು ಚೈನ್, ವ್ಯಾನಿಟಿ ಬ್ಯಾಗ್ ನಲ್ಲಿದ್ದ ನಗದು ಕಳ್ಳತನಗೊಂಡಿದೆ. ಇವರ ಮನೆ ಸಮೀಪದ ನೀರಾಜೆ ನಿವಾಸಿಗಳಾದ ಟೈಲರ್ ಆಗಿರುವ ರಝಾಕ್ ಮತ್ತು  ಭರ್ದ್ ಕೂಲರ್ ಕಂಪನಿಯ ಮಾಲಕ ಉಮ್ಮರ್ ಎಂಬವರ ಮನೆಯಿಂದ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಕಿಟಕಿಯ ಪಕ್ಕ ಮಲಗಿದ್ದ ಕಾರಣ  ಬಾಗಿಲು ತೆಗೆದು  ಮಹಿಳೆಯ ಎರಡೂ ಕಾಲಿನಲ್ಲಿದ್ದ ಚಿನ್ನದ ಸರ ಕಳವುಗೈಯಲಾಗಿದೆ. ಅಲ್ಲದೇ ಪಕ್ಕದಲ್ಲಿದ್ದ ವ್ಯಾನಿಟಿ ಬ್ಯಾಗ್ ನಿಂದ  ಹಣ  ಕಳವುಗೈಯ್ಯಲಾಗಿದೆ ಎಂದು ವರದಿಯಾಗಿದೆ.  ಬೆಳಿಗ್ಗೆ ಎದ್ದ ವೇಳೆ ಜುಲೈಕಾರವರಿಗೆ ಕಾಲಿನ ಚೈನು ಹಾಗೂ ವ್ಯಾನಿಟಿ ಬ್ಯಾಗ್ ಕಳ್ಳತನಗೊಂಡಿರುವುದು ಬೆಳಕಿಗೆ ಬಂದಿದೆ.   ಬಳಿಕ ಮನೆಯವರು ಕಡಬ ಪೊಲೀಸರಿಗೆ ದೂರು ನೀಡಿದ್ದು ಮಂಗಳೂರಿನಿಂದ ಶ್ವಾನದಳ ಕರೆಸಿ ತನಿಖೆ ನಡೆಸಲಾಗಿದೆ.

ಘಟನಾ ಸ್ಥಳಕ್ಕೆ  ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಕಡಬ ಠಾಣೆ ಎಸ್‌ಐ ರುಕ್ಮಯ, ಸಿಬ್ಬಂದಿಗಳಾದ ಕರುಣಾಕರ, ಶ್ರೀಶೈಲ, ಭಾಗ್ಯಮ್ಮ, ಕನಕರಾಜ್, ಭುವಿತ್‌ರಾಜ್,  ಶ್ವಾನದಳದ ಶಂಕರ್, ಕುಮಾರ್, ಶರತ್‌ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಕಡಬ ಟೈಮ್ಸ್ ಸುದ್ದಿ ಹಂಚಿರಿ