ಗಾಂಧಿ ಟೋಪಿ ಧರಿಸಿ ಮರ್ದಾಳದಿಂದ ಕಡಬದವರೆಗೆ ಹೆಜ್ಜೆ ಹಾಕಿದ ಶಾಸಕ ಎಸ್.ಅಂಗಾರ

0
ಕಡಬ ಟೈಮ್ಸ್ ಸುದ್ದಿ ಹಂಚಿರಿ

ಕಡಬ ಟೈಮ್ಸ್,ಮರ್ದಾಳ: ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರು  ಮರ್ದಾಳದಿಂದ  ಕಡಬದವರೆಗೆ ರಾಜ್ಯ ರಸ್ತೆಯಲ್ಲಿ ಗಾಂಧಿ ಟೋಪಿ ಧರಿಸಿ ಸುಮಾರು ಐದು ಕಿ.ಮೀ ನಡೆದರು  .ಇದು  ಬಿಜೆಪಿ ಕಡಬ ಶಕ್ತಿ ಕೇಂದ್ರದ ವತಿಯಿಂದ ಗಾಂಧಿ ಸಂಕಲ್ಪ ಯಾತ್ರೆಯ ಅಂಗವಾಗಿ ಬಿಜೆಪಿ ಕಾರ್ಯಕರ್ತರು  ಹಮ್ಮಿಕೊಂಡ ಗಾಂಧಿ ನಡಿಗೆ  ಕಾರ್ಯಕ್ರಮದಲ್ಲಿ  ಕಂಡು ಬಂದ ದೃಶ್ಯ.

ಮೊದಲು  ಮರ್ದಾಳದಲ್ಲಿ  ಗಾಂಧಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ನಡೆಸಿ ಬಳಿಕ ಪಾದಯಾತ್ರೆಯ ಮೂಲಕ ಗಾಂಧಿ ಟೋಪಿ ಧರಿಸಿದ ಬಿಜೆಪಿ ಕಾರ್ಯಕರ್ತರು ರಾಷ್ಟ್ರ ಧ್ವಜ ಹಿಡಿದು ಕಡಬಕ್ಕೆ ಆಗಮಿಸಿದರು, ಶಾಸಕ ಅಂಗಾರ ಸೇರಿದಂತೆ ಬಿಜೆಪಿ ಮುಖಂಡರು ಈ ಗಾಂಧಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ  ಕಡಬ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,  ಪ್ರಧಾನ ಕಾರ್ಯದರ್ಶಿ ಪ್ರಬೋದ್ ಶೆಟ್ಟಿ ಮೇನಾಲ, ಪುತ್ತೂರು ಎ.ಪಿ.ಎಂ.ಸಿ ಅಧ್ಯಕ್ಷ ದಿನೇಶ್ ಮೆದು,  ಜಿಲ್ಲಾ ಹಿಂದುಳಿದ ವರ್ಗಗಳ ಮೊರ್ಛದ ಅಧ್ಯಕ್ಷ ಸುರೇಶ್ ಪುಳಿಮರಡ್ಕ, ಜಿ.ಪಂ. ಸದಸ್ಯರಾದ ಆಶಾ ತಿಮ್ಮಪ್ಪ,  ಪ್ರಮೀಳಾ ಜನಾರ್ದನ, ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎಮರ್ಯಿಲ್  ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.   ಬಿಜೆಪಿ ಪ್ರಮುಖರಾದ ಸತೀಶ್ ಕೆ ಐತ್ತೂರು , ಪ್ರಕಾಶ್ ಎನ್.ಕೆ, ಅಶೋಕ್ ಕುಮಾರ್ ಪಿ, ಗಿರೀಶ್ ಎ.ಪಿ, ಕಿಶನ್ ಕುಮಾರ್ ರೈ,ನೇತ್ರತ್ವದಲ್ಲಿ  ಬೆಲ್ಲ ನೀರು ಕೊಟ್ಟು ಸ್ವಾಗತಿಸಲಾಯಿತು.

ಗಾಂಧಿಜಿಯ ಚಿಂತನೆಗಳು ಪ್ರತಿ ಗ್ರಾಮಗಳಲ್ಲಿ ಪ್ರಾರಂಭವಾಗಲಿದ್ದು ಇದರಿಂದ ಇಡೀ ದೇಶದಲ್ಲಿ ಗಾಂಧಿ ಚಿಂತನೆಗಳು ಸಾಕಾರಗೊಳ್ಳಲಿದೆ –ಎಸ್. ಅಂಗಾರ , ಶಾಸಕರು


ಕಡಬ ಟೈಮ್ಸ್ ಸುದ್ದಿ ಹಂಚಿರಿ