Tuesday, July 7, 2020
Home Blog
Kadaba Times:Kadaba Mescom jurisdiction there would be a power outrage and  if the issue is not resolved immediately, a protest will be held on February 20 in front of the Kadaba Mescom office warned by Mr .shayed  Meera Shaheb Kadaba JDS leader at the press conference held on Saturday at Kadaba. The electricity users...
ಕಡಬ ಟೈಮ್ಸ್,ಪಟ್ಟಣ ಸುದ್ದಿ : ಕಡಬ ಮೆಸ್ಕಾಂ ವ್ಯಾಪ್ತಿಯ ಎಲ್ಲಾ ಕಡೆಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದಲ್ಲಿ ಫೆಬ್ರವರಿ 20ರಂದು  ಕಡಬ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು  ಎಂದು ಕಡಬ ತಾಲೂಕು ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬರು ಎಚ್ಚರಿಸಿದ್ದಾರೆ. ಅವರು ಶನಿವಾರದಂದು ಕಡಬದಲ್ಲಿ ಕಾಂಗ್ರೆಸ್, ಜೆಡಿಎಸ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ರೈತ ಸಂಘ, ವರ್ತಕರು ಸಂಘಗಳ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಳೆದ 2 ವರ್ಷಗಳಿಂದ   ವಿದ್ಯುತ್...
ಕಡಬ ಟೈಮ್ಸ್, ಕಲ್ಲುಗುಡ್ಡೆ: ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಪುಂಡಿಕ್‍ಮಾಡ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ಅಭಿವೃದ್ಧಿ ಸಮಿತಿ ವತಿಯಿಂದ ರೆಂಜಿಲಾಡಿ ಗೋಳಿಯಡ್ಕ ಪುಂಡಿಕ್‍ಮಾಡದಲ್ಲಿ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮ ಶನಿವಾರ ನಡೆಯಿತು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಅವರ ಸಾರಥ್ಯದಲ್ಲಿ ಪ್ರಸಾದ್ ಕೆದಿಲಾಯ ಅವರ ನೇತೃತ್ವದಲ್ಲಿ ಶನಿವಾರ ಸಾಯಂಕಾಲ ಗರ್ಗಸ್‍ಪಾಲ್ ಡೊಂಕಿಮಾರ್ ಛಾವಡಿಯಲ್ಲಿ ಗಣಹೋಮ ಹಾಗೂ ದೈವಗಳ ಶುದ್ಧೀಕಲಶ ನಡೆದು ರಾತ್ರಿ ಪೂರ್ವ ಸಂಪ್ರದಾಯದಂತೆ...
ಕಡಬ ಟೈಮ್ಸ್, ಅಡ್ಡಹೊಳೆ: ಚಾಲಕನ ನಿಯಂತ್ರಣ ತಪ್ಪಿ ಟೂರಿಸ್ಟ್ ಟೆಂಪೋವೊಂದು ಪಲ್ಟಿಯಾದ ಪರಿಣಾಮ 20 ಮಂದಿ ಗಾಯಗೊಂಡ ಘಟನೆ ನೆಲ್ಯಾಡಿ ವಲಯದ ಅಡ್ಡಹೊಳೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ‌. ಪುತ್ತೂರಿನಲ್ಲಿ ನಡೆಯಲಿದ್ದ ಮದುವೆಗೆಂದು ಸಕಲೇಶಪುರದಿಂದ ಹೊರಟಿದ್ದ ಮಿನಿಬಸ್ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ...
ಕಡಬ ಟೈಮ್ಸ್, ಸವಣೂರು: ಕಡಬ ತಾಲೂಕಿನ  ಕುದ್ಮಾರು  ಶಾಂತಿಮೊಗರು ತಿರುವಿನಲ್ಲಿ ಫೆ. 14ರ ಮಧ್ಯರಾತ್ರಿ ಗೂಡಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ.   ಕುದ್ಮಾರಿನಲ್ಲಿ 5ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯದ  ಆರೋಪದ ಹಿನ್ನೆಲೆಯಲ್ಲಿ  ಫೆ.14ರಂದು ಕುದ್ಮಾರಿನ ಶಾಂತಿಮೊಗರು ತಿರುವಿನಲ್ಲಿ ಅಂಗಡಿ ಹೊಂದಿರುವ ಅಬ್ದುಲ್ ಎಂಬಾತನನ್ನು  ಬೆಳ್ಳಾರೆ ಪೋಲೀಸರು ವಶಕ್ಕೆ ಪಡೆದಿದ್ದರು. ಇದೀಗ ಅಂದೇ ರಾತ್ರಿ ಈತನಿಗೆ ಸೇರಿದ್ದ ಗೂಡಂಗಡಿಗೆ ಬೆಂಕಿ ಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಮಧ್ಯರಾತ್ರಿ 2 ಗಂಟೆ...
ಕಡಬ ಟೈಮ್ಸ್,ವಿಶೇಷ: ಕಡಬ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ  ಇದೇ  ಫೆಬ್ರವರಿ 28ಮತ್ತು 29 ರಂದು  ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.  ಈ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರು  ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ಶಿಕ್ಷಕ,ಲೇಖಕ  ಟಿ.ನಾರಾಯಣ ಭಟ್ ರಾಮಕುಂಜ.  ಸಮ್ಮೇಳನಾಧ್ಯಕ್ಷ ರೊಂದಿಗೆ ಕಡಬ ಟೈಮ್ಸ್ ಚಿಟ್ ಚಾಟ್ ವೀಡಿಯೋ ನೋಡಿ. https://youtu.be/ZtxQVqqfD2Y ಗ್ರಾಮೀಣ ಭಾಗವಾಗಿರುವ ರಾಮಕುಂಜದಲ್ಲಿ  ಕೃಷಿ ಕುಟುಂಬದ ಹಿನ್ನೆಲೆಯಲ್ಲಿ...
ಕಡಬ ಟೈಮ್ಸ್,ಪುತ್ತೂರು: ಆರು ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರನ್ನು ಕಡಬ ಪೊಲೀಸರು ಶುಕ್ರವಾರ ಪತ್ತೆ ಹಚ್ಚಿದ್ದು, ಇದರ ಬೆನ್ನಲ್ಲೆ ಕಾರು ಚಾಲಕ ಪ್ರಶಾಂತ್ ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಪ್ರಬಲ ಆಕಾಂಕ್ಷಿಯಾಗಿದ್ದ ಕುಮಾರ್ ಪುತ್ತಿಲ ಅವರಿಗೆ ಸೇರಿದ ಕಾರು ಇದಾಗಿದೆ.ಅರುಣ್ ಪುತ್ತಿಲ ಅವರು ಚಾಲಕ ಕಾರನ್ನು ಕೊಂಡೊಯ್ದು ಬಗ್ಗೆ ಪೊಲೀಸರಿಗೆ ತಿಳಿಸಿರುವುದಾಗಿ ತಿಳಿದು ಬಂದಿದೆ. ಕಳೆದ...
ಕಡಬ ಟೈಮ್ಸ್, ಕೌಕ್ರಾಡಿ :ದೈವಗಳ ಆರಾಧನೆಯಿಂದ ಸನಾತನ ಸಂಸ್ಕೃತಿ ಉಳಿಯುಲಿದೆ, ಈ ನಿಟ್ಟಿನಲ್ಲಿ ಯುವ ಸಮುದಾಯ ಸತ್ಕಾರ್ಯ ಮತ್ತು ಧರ್ಮದ ಅನುಷ್ಠಾನ ಮಾಡಿ ಧರ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿ ಹೇಳಿದರು.  ಅವರು ಫೆಬ್ರವರಿ 13 ರಂದು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಸ್ವಾಮಿ ಕೊರಗಜ್ಜ, ಬ್ರಹ್ಮ ಮುಗೇರ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿ, ಕಾಲ ಪರಿವರ್ತನೆಯ ಅಂಚಿನಲ್ಲಿರುವ ಈ ದಿನಗಳಲ್ಲಿ ಸಂಸ್ಕೃತಿ ಸಂಸ್ಕಾರದ ಜ್ಯೋತಿ ಬೆಳಗುವ ಮೂಲಕ ಆತ್ಮ...
ಕಡಬ ಟೈಮ್ಸ್, ಪಟ್ಟಣ ಸುದ್ದಿ: ಆರು ತಿಂಗಳ ಹಿಂದೆ  ಮಹಿಳೆಯೊಬ್ಬರಿಗೆ  ಡಿಕ್ಕಿ ಹೊಡೆದು  ಪರಾರಿಯಾದ ಕಾರನ್ನು ಕಡಬ ಪೊಲೀಸರು ಪತ್ತೆಹಚ್ಚಿದ್ದಾರೆ.   ಈ ಕಾರು ಅರುಣ್ ಕುಮಾರ್ ಪುತ್ತಿಲ  ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.  ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾದ  ಕಾರಿನ ಬಗ್ಗೆ  ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಆಧಾರಿಸಿ ಪತ್ತೆಹಚ್ಚಲಾಗಿದ್ದು, ಪೊಲೀಸರು ಕೊನೆಗೂ  ಬೆನ್ನಟಿ ಪ್ರಕರಣವನ್ನು ಬೇಧಿಸಿದ್ದಾರೆ. ...
ಕಡಬ ಟೈಮ್ಸ್, ಮನೋರಂಜನೆ:  ಕಡಬ ಸೇರಿದಂತೆ  ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಆಗಾಗ ಕೈ ಕೊಟ್ಟು  ತೆರಿಗೆದಾರನಿಗೆ ಮೆಸ್ಕಾಂ ಇಲಾಖೆ  ನಿರಂತರ ಶಾಕ್ ನೀಡುತ್ತಾ ಬಂದಿದೆ. ಈ ನಡುವೆ ಸಾಮಾಜಿಕ ತಾಣದಲ್ಲಿ  “ಕಡಬದಲ್ಲಿ ಏನು ಬೇಕಾದ್ರೂ ಸಿಗುತ್ತೆ...ಕರೆಂಟ್ ಒಂದು ಬಿಟ್ಟು!”  ಎನ್ನುವ  ಹಾಸ್ಯ ಸಾಲಿನ ಜೊತೆಗೆ   ಹಾಸ್ಯ ನಟ ಅರವಿಂದ  ಬೋಳಾರ್ ಅವರ ಪೊಟೋ  ವೈರಲ್ ಆಗಿದೆ. ಜನರು ಯಾವುದೇ ದಿಕ್ಕು ತೋಚದೆ  ವಿಧಿಯಿಲ್ಲದೆ  ಅಳುವಂತ ಸನ್ನಿವೇಶಕ್ಕೆ ಹೋಲಿಸಿ ಈ ಇಮೇಜ್ ನ್ನು ವಿವಿಧ ವಾಟ್ಸಪ್ ಗುಂಪುಗಳಲ್ಲಿ ಹಂಚಲಾಗುತ್ತಿದೆ.ಇದರ ಜೊತೆಗೆ ಸ್ಟೇಟಸ್ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ....
ಕಡಬ ಟೈಮ್ಸ್ ಗೆ ಸುದ್ದಿ ಕಳುಹಿಸಿ